ನಳಂದಾ ವಿಶ್ವವಿದ್ಯಾಲಯ 🕉️🙏
ಹ್ಯೂಯೆನ್ ತ್ಸಾಂಗ್ ಅವರು ನಳಂದಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯಲು ಬಂದಾಗ ಅವರು ನಳಂದಾ ವಿಶ್ವವಿದ್ಯಾಲಯದ ಕಾವಲುಗಾರರು (ವಾಚ್‌ಮ್ಯಾನ್) ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ವಿಫಲರಾದರು, ಆದರೆ ಅವರು ಇಮ್ಮಡಿ ಪುಲಿಕೇಶಿ ರಾಜ ಪ್ರಭಾವದಿಂದ ನಳಂದಾ ವಿಶ್ವವಿದ್ಯಾಲಯಕ್ಕೆ ಶಿಕ್ಷಣವನ್ನು ಪಡೆಯಲು ಬಂದರು. ಅವರು ನಳಂದಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಹ್ಯೂಯೆನ್ ತ್ಸಾಂಗ್ ಮೋಕ್ಷದೇವ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಮತ್ತು ಅವರ ಗುರು ಶೀಲಭದ್ರರಿಂದ ಸನಾತನ ಧರ್ಮದ ಎಲ್ಲ ತರಹದ ಶಿಕ್ಷಣ ಪಡೆದರು. ಹ್ಯೂಯೆನ್ ತ್ಸಾಂಗ್ ಎರಡು ವಷ೯ ನಳಂದ ವಿಶ್ವವಿದ್ಯಾಲಯದಿಂದ ಮುಗಿಸಿಕೊಂಡು ಚೀನಾಗೆ ಹೋಗುವಾಗ ತಾನು ಕಲಿತಿದ ಸಂಸ್ಕತ ಭಾಷೆ ಪುಸ್ತಕ ಹಾಗೂ ಬೇರೆ ಬೇರೆ ಗ್ರಂಥಗಳು ಆ ವಿಶ್ವವಿದ್ಯಾಲಯದ ತನ್ನ ಚೀನಾ ಭಾಷೆ ಆದ ಮ್ಯಾಂಡರಿನ್ ಭಾಷಂತರಿಸಿ ತನ್ನ ಕುದುರೆಯ ಮೇಲೆ ರಾಶಿ ರಾಶಿ ಜ್ಞಾನದ ಭಂಡಾರದ ಪುಸ್ತಕಗಳನ್ನ ತೆಗೆದುಕೊಂಡು ಹೋಗಿದರು ಅಂತ ಇದೆ. ಹಾಗೆ ಇವರು ನಳಂದ ವಿಶ್ವವಿದ್ಯಾಲಯದ ಮೇಲ್ ಚಾವಣಿಯಲ್ಲಿ ಕೂತಿರುವಾಗ ಆಕಾಶದ ಮೋಡದಲ್ಲಿ ತೇಲಾಡುತ್ತಿರುವ ಅನುಭವ ಆಗುತ್ತಿತ್ತು ಅಂತ ತನ್ನ ಸಿ.ಯು.ಕಿ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ 🕉️🙏
ಮಾಹಿತಿ:-ಶಶಿಕುಮಾರ್ ಅಮಾತಿ.
No comments:
Post a Comment